1 Peter 5

ದೇವರ ಮಂದೆಯ ಪೋಷಣೆ

1ಸಭೆಯ ಹಿರಿಯರೇ,
5:1 2 ಯೋಹಾ. 1. 3 ಯೋಹಾ. 1.
ಜೊತೆಹಿರಿಯವನಾದ ನಾನು ಕ್ರಿಸ್ತನ ಬಾಧೆಗಳನ್ನು
5:1 ಲೂಕ. 24:48; ಯೋಹಾ. 15:27; ಅ. ಕೃ. 1:8, 22; 2:32; 3:15; 4:33; 5:32; 10:39, 41; 13:31; 1 ಕೊರಿ. 15:15:
ಕಣ್ಣಾರೆ ಕಂಡವನೂ, ಇನ್ನು ಮುಂದೆ ಪ್ರತ್ಯಕ್ಷವಾಗುವ ಮಹಿಮೆಯಲ್ಲಿ ಪಾಲುಗಾರನೂ ಆಗಿದ್ದು ನಿಮ್ಮನ್ನು ಪ್ರೋತ್ಸಾಹಿಸಿ ಹೇಳುವುದೇನಂದರೆ,
2
5:2 ಯೋಹಾ 21:16; ಅ. ಕೃ. 20:28; ಪ್ರಕ. 7:17:
ನಿಮ್ಮ ಮೇಲ್ವಿಚಾರಣೆಯಲ್ಲಿರುವ ದೇವರ ಮಂದೆಯನ್ನು ಕಾಯಿರಿ.
5:2 ಫಿಲೆ. 14:
ಬಲವಂತದಿಂದಲ್ಲ ದೇವರ ಚಿತ್ತಾನುಸಾರ ಇಷ್ಟಪೂರ್ವಕವಾಗಿ,
5:2 1 ತಿಮೊ. 3:8; ತೀತ. 1:7:
ನೀಚವಾದ ದ್ರವ್ಯಾಶೆಯಿಂದಲ್ಲ, ಸಿದ್ಧ ಮನಸ್ಸಿನಿಂದಲೇ ಮೇಲ್ವಿಚಾರಣೆ ಮಾಡಿರಿ.
3ನಿಮ್ಮ ವಶಕ್ಕೆ ಒಪ್ಪಿಸಿಕೊಟ್ಟಿರುವವರ ಮೇಲೆ
5:3 ಯೆಹೆ. 34:4; ಮತ್ತಾ 20:25; ಮಾರ್ಕ. 10:42; 2 ಕೊರಿ. 1:24:
ದೊರೆತನಮಾಡುವವರಂತೆ ನಡೆಯದೆ
5:3 ಫಿಲಿ. 3:17; 2 ಥೆಸ. 3:9; 1 ತಿಮೊ. 4:12; ತೀತ. 2:7:
ಮಂದೆಗೆ ಮಾದರಿಯಾಗಿಯೇ ನಡೆದುಕೊಳ್ಳಿರಿ.
4
5:4 ಇಬ್ರಿ. 13:20:
ಪ್ರಧಾನ ಕುರುಬನು ಪ್ರತ್ಯಕ್ಷನಾಗುವಾಗ ನೀವು
5:4 1 ಪೇತ್ರ. 1:4, 7; 4:13; 5:1, 10:
ಎಂದಿಗೂ ಬಾಡದ ಮಹಿಮೆಯ
5:4 1 ಕೊರಿ. 9:25; ಯಾಕೋಬ 1:12:
ಕಿರೀಟವನ್ನು ಹೊಂದುವಿರಿ.

5ಯೌವನಸ್ಥರೇ, ಅದೇ ರೀತಿಯಾಗಿ ಹಿರಿಯರಿಗೆ ಅಧೀನರಾಗಿರಿ. ನೀವೆಲ್ಲರೂ
5:5 ಮತ್ತಾ 20:26, 27; ಯೋಹಾ. 13:4, 5, 14:
ದೀನಮನಸ್ಸೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆ ಮಾಡಿರಿ. ಏಕೆಂದರೆ <<
5:5 ಯಾಕೋಬ 4:6, 10:
ದೇವರು ಅಹಂಕಾರಿಗಳನ್ನು ವಿರೋಧಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.>>
6ಹೀಗಿರುವುದರಿಂದ ದೇವರ ಬಲವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ಎತ್ತುವನು. 7
5:7 ಕೀರ್ತ. 37:5; 55:22; ಮತ್ತಾ 6:25:
ನಿಮ್ಮ ಚಿಂತಾಭಾರವನ್ನೆಲ್ಲಾ ಆತನ ಮೇಲೆ ಹಾಕಿರಿ ಆತನು ನಿಮಗೋಸ್ಕರ ಚಿಂತಿಸುತ್ತಾನೆ.

8
5:8 1 ಪೇತ್ರ. 1:13:
ಸ್ವಸ್ಥಚಿತ್ತರಾಗಿರಿ
5:8 ಮತ್ತಾ 24:42; 25:13; 26:41; ಮಾರ್ಕ. 14:34-38; ಲೂಕ. 12:37; 21:36; ಅ. ಕೃ. 20:31; 1 ಕೊರಿ. 16:13; 1 ಥೆಸ. 5:6:
ಎಚ್ಚರವಾಗಿರಿ.
5:8 ಲೂಕ. 22:31; ಎಫೆ. 4:27; 6:11; 2 ಕೊರಿ. 2:11; ಪ್ರಕ. 12:9, 11. ಯೋಬ. 1:9 -12:
ನಿಮ್ಮ ವಿರೋಧಿಯಾಗಿರುವ ಸೈತಾನನು
5:8 ಕೀರ್ತ. 22:20:
ಘರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗಾಡುತ್ತಿದ್ದಾನೆ.
9
5:9 ಕೊಲೊ. 2:5:
ನೀವು ನಂಬಿಕೆಯಲ್ಲಿ ದೃಢವಾಗಿದ್ದು
5:9 ಯಾಕೋಬ 4:7:
ಅವನನ್ನು ಎದುರಿಸಿರಿ.
5:9 ಅ. ಕೃ. 14:22; 1 ಥೆಸ. 3:3; 2 ತಿಮೊ. 3:12:
ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂಬುದು ನಿಮಗೆ ತಿಳಿದಿದೆ.

10ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯ ಮಹಿಮೆಗೆ
5:10 1 ಕೊರಿ. 1:9; 1 ಥೆಸ. 2:12; 1 ತಿಮೊ. 6:12:
ಕರೆದ ಕೃಪಾಪೂರ್ಣನಾದ ದೇವರು ತಾನೇ, ನೀವು
5:10 1 ಪೇತ್ರ. 1:6:
ಸ್ವಲ್ಪ ಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯಥಾಸ್ಥಿತಿಗೆ ತಂದು
5:10 ಲೂಕ. 22:32; ರೋಮಾ. 16:25; 1 ಥೆಸ. 3:2:
ಸ್ಥಿರಪಡಿಸಿ ಬಲಪಡಿಸುವನು.
11
5:11 1 ಪೇತ್ರ. 4:11:
ಆತನಿಗೆ ಅಧಿಪತ್ಯವು ಯುಗಯುಗಾಂತರಗಳಲ್ಲಿಯೂ ಇರಲಿ. ಆಮೆನ್.

ಕಡೆ ವಂದನೆಗಳು

12ನಿಮ್ಮನ್ನು ಪ್ರೋತ್ಸಾಹಿಸುವುದಕ್ಕೂ ಇದೇ ದೇವರ ನಿಜವಾದ ಕೃಪೆ ಎಂದು ಸಾಕ್ಷಿ ಹೇಳುವುದಕ್ಕೂ ನಾನು
5:12 ಇಬ್ರಿ. 13:22:
ಸಂಕ್ಷೇಪವಾಗಿ ಬರೆದು, ನಂಬಿಗಸ್ತನಾದ ಸಹೋದರನೆಂದು ನಾನು ಎಣಿಸುವ ಸಿಲ್ವಾನನ ಕೈಯಲ್ಲಿ ಇದನ್ನು ಕಳುಹಿಸಿದ್ದೇನೆ. ಈ ನಿಜವಾದ ಕೃಪೆಯಲ್ಲಿ
5:12 1 ಕೊರಿ. 15:1:
ನಿಲ್ಲಿರಿ.
13ದೇವರು ನಿಮ್ಮೊಂದಿಗೆ ಆರಿಸಿಕೊಂಡಂಥ ಬಾಬೆಲೋನಿನಲ್ಲಿರುವ ಸಭೆಯು ನಿಮಗೆ ವಂದಿಸುತ್ತದೆ. ನನ್ನ ಮಗನಾದ
5:14 ಅ. ಕೃ. 12:12:
ಮಾರ್ಕನು ಸಹ ನಿಮ್ಮನ್ನು ವಂದಿಸುತ್ತಾನೆ.
14
5:14 ರೋಮಾ. 16:16:
ಪ್ರೀತಿಯಿಂದ ಮುದ್ದಿಟ್ಟು ಒಬ್ಬರನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೂ
5:14 ಎಫೆ. 6:23:
ಸಮಾಧಾನವುಂಟಾಗಲಿ.

Copyright information for KanULB